Add Your Heading Text Here




ಕೇವಲ 6 – 8 ಜನರಿಂದ ರಿಂದ ಶುರು ಆದ ಬ್ರಾಹ್ಮಣ ಮಿತ್ರ ವೇದಿಕೆಯು. ಬ್ರಾಹ್ಮಣ ಸಮುದಾಯದ ಮತ್ತು ಸಾಮಾಜಿಕ ಏಳಿಗೆಗಾಗಿ ಹಲವು ಯೋಜನೆಗಳ ಕಾರ್ಯರೂಪಕ್ಕೆ ರೂಪುರೇಷೆಯನ್ನು ಸಿದ್ಧಪಡಿಸಿತು.
ಅವುಗಳು ಇಂತಿವೆ
ಇದು ಬ್ರಾಹ್ಮಣ ಮಿತ್ರರ ವೇದಿಕೆಯ ಮೂಲಭೂತ ಉದ್ದೇಶದ ಯೋಜನೆಯಾಗಿದ್ದು, ಪ್ರಸ್ತುತ ಸಮಾಜದಲ್ಲಿ ಅಶಕ್ತರಾದ, ಅನಾರೋಗ್ಯದಿಂದ ಬಳಲುತ್ತಿರುವ,ಬ್ರಾಹ್ಮಣ ಕುಟುಂಬಗಳಿಗೆ ಅಥವಾ ವಿದ್ಯಾಭ್ಯಾಸಕ್ಕೆ ಅಗತ್ಯವಿರುವ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಆರ್ಥಿಕ ಸಹಾಯವನ್ಮು ಮಾಡುವ ಗುರಿಯನ್ನು ಹೊಂದಿದೆ.
ಬ್ರಾಹ್ಮಣ ವಿದ್ಯಾರ್ಥಿಗಳ ಅಭ್ಯುದಯಕ್ಕೋಸ್ಕರ ತಾಯಿ ಶಾರದೆಯ ಆಶೀರ್ವಾದದೊಂದಿಗೆ ಈ ಶಾರದಾಕೃಪಾ ಯೋಜನೆಯನ್ನು ಪ್ರಸ್ತುತಪಡಿಸಿತು.
ಬ್ರಾಹ್ಮಣ ಸಮುದಾಯದ ಏಳಿಗೆಗಾಗಿ ಶುರು ಮಾಡಿದ ಸಂಸ್ಥೆಯಾದರೂ ಸರ್ವೇ ಜನಾಃ ಸುಖಿನೋ ಭವಂತು ಎಂಬ ಉಕ್ತಿಯಂತೆ ಪ್ರಸ್ತುತ ಸಮಾಜದ ಮಧ್ಯ ಇರುವ ನಾವೆಲ್ಲ ಸಮಾಜಕ್ಕೋಸ್ಕರ ಒಂದಿಷ್ಟು ಸೇವೆಯನ್ನು ಮಾಡುವ ಮಹದುದ್ದೇಶದೊಂದಿಗೆ ಈ ಸಾಮಾಜಿಕ ಸೇವೆಯನ್ನು ಮಾಡುವ ಯೋಜನೆಯೇ ಈ ಸರ್ವೋನ್ನತಿ
ಸಮಾಜದಲ್ಲಿ ತಮ್ಮ ಔದ್ಯೋಗಿಕ ಕ್ಷೇತ್ರದ ಮುಖಾಂತರ ಎಲೆಮರೆಕಾಯಿಯಾಗಿದ್ದುಕೊಂಡು ತಮ್ಮದೇ ಆದ ಕೆಲವು ಸೇವೆಗಳನ್ನು ಸಲ್ಲಿಸುತ್ತಾ ಸಮಾಜದ ಮತ್ತು ಬ್ರಾಹ್ಮಣ ಸಮುದಾಯದ ಏಳಿಗೆಗೆ ಶ್ರಮಿಸುವ ಬ್ರಾಹ್ಮಣಸಾಧಕರನ್ನು ಗೌರವಿಸಿ ಆ ಮೂಲಕ ಇನ್ನಷ್ಟು ಜನರಿಗೆ ಉತ್ಸಾಹವನ್ನು ತುಂಬುವ ಯೋಜನೆಯೇ ನಮ್ಮ ವೇದಿಕೆಯ ಈ ಸಾಧಕನಮನ
ಬ್ರಾಹ್ಮಣ ಸಮುದಾಯದಲ್ಲಿ ಯಾವುದೇ ಆರ್ಥಿಕವಾದ ಆಧಾರವಿಲ್ಲದೆ, ಅನಾರೋಗ್ಯದ ಸಮಸ್ಯೆ ಇಂದ ದುಡಿಯಲು ಕೂಡ ಆಗದೆ ಇರುವಂಥ ಕುಟುಂಬಗಳಿಗೆ ಮೂಲಭೂತವಾದ ಆಹಾರ ಅಥವಾ ಚಿಕೆತ್ಸೆಗಾಗಿ ಆರ್ಥಕಭದ್ರತೆಯನ್ನು ಒದಗಿಸುವ ಯೋಜನೆಯೇ ಸದನ-ಸಂಜೀವಿನೀ