ನಮ್ಮ ವೇದಿಕೆಯ ಈ ವರ್ಷದ (೨೦೨೦) ಮಹತ್ವಾಕಾಂಕ್ಷೆ ಯೋಜನೆ ಇದಾಗಿದೆ.
ಬ್ರಾಹ್ಮಣ ಸಮುದಾಯದಲ್ಲಿ ಯಾವುದೇ ಆರ್ಥಿಕವಾದ ಆಧಾರವಿಲ್ಲದೆ, ಅನಾರೋಗ್ಯದ ಸಮಸ್ಯೆ ಇಂದ ದುಡಿಯಲು ಕೂಡ ಆಗದೆ ಇರುವಂಥ ಕುಟುಂಬಗಳಿಗೆ ಮೂಲಭೂತವಾದ ಆಹಾರ ಅಥವಾ ಚಿಕೆತ್ಸೆಗಾಗಿ ಆರ್ಥಕಭದ್ರತೆಯನ್ನು ಒದಗಿಸುವ ಯೋಜನೆಯೇ ಸದನ-ಸಂಜೀವಿನೀ.
ಸ್ವರೂಪ
ಈ ಯೋಜನೆಯಲ್ಲಿ ಮೇಲೆ ತಿಳಿಸಿದಂತೆ ಯಾವುದೇ ಆಸ್ತಿ, ಉದ್ಯೋಗ,ಇಲ್ಲದಿರುವುದರಿಂದ, ಅನಾರೋಗ್ಯದಿಂದ ಉದ್ಯೋಗವನ್ನೂ ನಿರ್ವಹಿಸಲು ಸಾಧ್ಯವಿಲ್ಲದಿರುವುದರಿಂದ ಅಥವಾ ಮಾನಸಿಕ ಅಸ್ವಸ್ಥತೆ ಇಂದ ಬಳಲುತ್ತಿರುವ ಅಶಕ್ತ ಬ್ರಾಹ್ಮಣ ಕುಟುಂಬಗಳನ್ನು ಪೋಷಿಸುವ ಯೋಜನೆ.
ಈ ಮೂಲಕ, ಅನುಕೂಲವಾದಲ್ಲಿ ಇನ್ನ್ನೂ ಹೆಚ್ಚು ಕುಟುಂಬಗಳಿಗೆ ಆಸರೆಯಾಗಬೇಕೆಂಬ ಇಚ್ಛೆಯು ನಮ್ಮ ವೇದಿಕೆಯ ಗುರಿಯಾಗಿದೆ.
2020 ನೇ ವರ್ಷದಲ್ಲಿ ದೇಶ ಮತ್ತು ಜಗತ್ತನ್ನು ಕಾಡುತ್ತಿರುವ ಮಾರಕ ಸಮಸ್ಯೆ ಕೊರೊನಾ/ಕೋವಿಡ್-೧೯.
ಇದರ ದುಷ್ಪರಿಣಾಮ ಎಲ್ಲರ ಮೇಲೂ ಆಗಿದೆ. ಸ್ವಾವಲಂಬಿಯಾಗಿ ಪ್ರತಿನಿತ್ಯದ ದುಡಿಮೆಯನ್ನು ಆಶ್ರಯಿಸಿದ ಬ್ರಾಹ್ಮಣ ಸಮುದಾಯದ ಮೇಲೆ ಅತ್ಯಂತ ಪರಿಣಾಮಕಾರಿಯಾಗಿ ಆಕ್ರಮಿಸಿತು.
ಸ್ವಾವಲಂಬನೆ, ಸ್ವಾಭಿಮಾನವೇ ಶ್ರೇಷ್ಠ ಎಂದು ಬದುಕುವ ಬ್ರಾಹ್ಮಣ ಸಮುದಾಯಕ್ಕೆ ಸರ್ಕಾರದಿಂದ ಹೇಳುವಂತಹ ಯಾವುದೇ ಸವಲತ್ತುಗಳು ಸಿಗಲಿಲ್ಲ ಹಾಗು ಇತರ ಸಮುದಾಯಕ್ಕೆ ಸಿಕ್ಕಂತೆ ಅಗತ್ಯ ನೆರವು ಕೂಡ ಸಿಗಲಿಲ್ಲ. ಇಂತಹ ಸಮಯದಲ್ಲಿ ಬ್ರಾಹ್ಮಣ ಮಿತ್ರರ ವೇದಿಕೆಯು ನಮ್ಮವರ ಕಷ್ಟಗಳಿಗೆ ಹೆಗಲು ಕೊಡಲು ತೀರ್ಮಾನಿಸಿತು. ಅದರಂತೆ ಈ ಸಮಯದಲ್ಲಿ ಉದ್ಯೋಗವಿಲ್ಲದೆ, ಆರ್ಥಿಕ ಸಂಕಷ್ಟಕ್ಕೀಡಾಗಿದ್ದ ಕುಟುಂಬಗಳಿಗೆ ರೇಷನ್ಕಿಟ್, ಮೆಡಿಸಿನ್ಕಿಟ್ಗಳನ್ನು ಹಂಚಿ ತನ್ನ ಚಿಕ್ಕಸೇವೆಯನ್ನು ಸಲ್ಲಿಸಿದೆ.
ಹೀಗೆ ಕೋವಿಡ್೧೯ ವಿರುದ್ಧವಾಗಿ ಬ್ರಾಹ್ಮಣರ ಸೇವೆ ಸಲ್ಲಿಸುವುದರ ಮುಖಾಂತರ ನಮ್ಮ ವೇದಿಕೆ ಬ್ರಾಹ್ಮಣರ ಏಳಿಗೆಯೇ ನಮ್ಮ ಗುರಿ ಎನ್ನುವುದನ್ನು ಸಾಬೀತು ಪಡಿಸಿತು.